ನಮಸ್ಕಾರ ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಜಾಗತಿಕ ರಾಜಕೀಯ ಹಾಗೂ ಆರ್ಥಿಕ ಪರಿಸ್ಥಿತಿಗಳ ಪ್ರಭಾವವು ನಾಣ್ಯ ಮಾರುಕಟ್ಟೆಗಳ ಮೇಲೆ ತೀವ್ರವಾಗಿ ಬೀರುತ್ತಿರುವಂತಾಗಿದ್ದು, ವಿಶೇಷವಾಗಿ ಚಿನ್ನದ ಬೆಲೆಯಲ್ಲಿ ಕುಸಿತ ಉಂಟಾಗಿದೆ. ಬಹುತೇಕ ಸಮಯದಲ್ಲಿ ಸಂಕಟದ ಸಮಯದಲ್ಲಿ ಚಿನ್ನವು ಸುರಕ್ಷಿತ ಹೂಡಿಕೆಯ ರೂಪದಲ್ಲಿ ಪರಿಗಣಿಸಲ್ಪಡುತ್ತದೆ. ಆದರೆ, ಕಳೆದ ಐದು ದಿನಗಳಿಂದ ಭಾರತದಲ್ಲಿ ಚಿನ್ನದ ಬೆಲೆ ಜಾಸ್ತಿ ಆಗುವುದಕ್ಕಿಂತ ಕಡಿಮೆಯಾಗುತ್ತಿರುವುದು ಗ್ರಾಹಕರಿಗೆ ಹೊಸ ಅವಕಾಶವನ್ನು ಒದಗಿಸಿದೆ.
ಇದನ್ನು ಓದಿ:SSC ನೇಮಕಾತಿ 2025: PUC ಪಾಸಾದರೆ ಸಾಕು.! ಸಂಬಳ ₹19,900 – 92,100.!
ಇಂದಿನ ಚಿನ್ನದ ಬೆಲೆ ವಿವರ (ಜೂನ್ 25, 2025):
ಚಿನ್ನದ ದರ – ಜೂನ್ 25, 2025
ಕ್ಯಾರೆಟ್ | 1 ಗ್ರಾಂ ದರ (₹) | 10 ಗ್ರಾಂ ದರ (₹) | ಇಂದಿನ ಬದಲಾವಣೆ |
---|---|---|---|
18 ಕ್ಯಾರೆಟ್ | ₹7,405 | ₹74,050 | ₹190 ಇಳಿಕೆ |
22 ಕ್ಯಾರೆಟ್ | ₹9,050 | ₹90,500 | ₹240 ಇಳಿಕೆ |
24 ಕ್ಯಾರೆಟ್ | ₹9,880 | ₹98,800 | ₹260 ಇಳಿಕೆ |
ಚಿನ್ನದ ಬೆಲೆಯಲ್ಲಿ ಇಂತಹ ಇಳಿಕೆಯನ್ನು ಹಿಂದೆ ಕೆಲವೇ ಬಾರಿ ಕಂಡುಬಂದಿದೆ. ಇದರಿಂದಾಗಿ, ಚಿನ್ನದ ಖರೀದಿಗೆ ಉತ್ಸುಕರಾಗಿರುವ ಗ್ರಾಹಕರು ಮುಂದೆ ಏನು ಎಂಬ ತೀರ್ಮಾನ ತೆಗೆದುಕೊಳ್ಳಲು ಮುಂದಾಗಿದ್ದಾರೆ, ಚಿನ್ನ ಖರೀದಿ ಮಾಡಬೇಕು ಅಥವಾ ಬೇಡವೇ.
ಬೆಳ್ಳಿ ಬೆಲೆಯಲ್ಲಿ ಸಹ ಇಳಿಕೆ:

ಇದನ್ನು ಓದಿ:Ration Card: ಹೊಸ ರೇಷನ್ ಕಾರ್ಡ್ ಪಟ್ಟಿ ಪ್ರಕಟ.!!ನಿಮ್ಮ ಹೆಸರು ಹೇಗೆ ಪರಿಶೀಲಿಸಬೇಕು..?
ಚಿನ್ನದ ಜೊತೆಗೆ ಬೆಳ್ಳಿಯ ಬೆಲೆಯಲ್ಲಿಯೂ ಇಳಿಕೆಯಾಗಿರುವುದು ಗಮನಾರ್ಹ. ಈ ಟೇಬಲ್ ಮೂಲಕ ಇಂದಿನ ಬೆಳ್ಳಿ ದರಗಳನ್ನು ಗಮನಿಸಿ:
ಲೋಹ 1 ಗ್ರಾಂ ಬೆಲೆ (₹) 1 ಕಿಲೋಗ್ರಾಂ ಬೆಲೆ (₹)
ಬೆಳ್ಳಿ ₹108 ₹1,08,000
ಹೆಚ್ಚು ಪ್ರಮಾಣದಲ್ಲಿ ಬೆಳ್ಳಿಯನ್ನು ಖರೀದಿಸಲು ಯೋಜಿಸುತ್ತಿರುವ ವ್ಯಾಪಾರಿಗಳು ಅಥವಾ ಗ್ರಾಹಕರು ಈಗ ತಮ್ಮ ನಿರ್ಧಾರವನ್ನು ಗಮನಿಸಬಹುದು ಏಕೆಂದರೆ ಇದೆ ಸೂಕ್ತ ಸಮಯವಾಗಿರುತ್ತೆ ಖರೀದಿ ಮಾಡಲು.
ಬೆಲೆ ಇಳಿಕೆಗೆ ಪ್ರಮುಖ ಕಾರಣಗಳು ಯಾವುವು?
ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಕೆ ಅಥವಾ ಇಳಿಕೆ ಹಲವು ಅಂಶಗಳಿಗೆ ಅವಲಂಬಿತವಾಗಿರುತ್ತವೆ. ಇತ್ತೀಚಿನ ಬೆಲೆ ಕುಸಿತಕ್ಕೆ ಕಾರಣವಾದ ಪ್ರಮುಖ ಅಂಶಗಳನ್ನು ಇಲ್ಲಿ ನೋಡೋಣ ಬನ್ನಿ:
1. ಜಾಗತಿಕ ರಾಜಕೀಯ ಶಾಂತಿ:
ಇತ್ತೀಚೆಗೆ ಇರಾನ್ ಮತ್ತು ಇಸ್ರೇಲ್ ನಡುವೆ ಉಂಟಾಗಿದ್ದ ಯುದ್ಧ ಈಗ ನಿಂತಿದೆ , ಅದರ ಪರಿಣಾಮವಾಗಿ ಮಾರುಕಟ್ಟೆಯಲ್ಲಿ ಚಿನ್ನದ ಮೇಲಿನ ಒತ್ತಡ ಕಡಿಮೆಯಾಗಿದೆ.
2. ಅಮೆರಿಕದ ಬಡ್ಡಿದರ ನಿರ್ಧಾರ:
ಅಮೆರಿಕದ ಫೆಡರಲ್ ರಿಸರ್ವ್ ತನ್ನ ಬಡ್ಡಿದರ ನಿರ್ಧಾರವನ್ನು ಸ್ಥಿರವಾಯಿಸಿದ್ದು, ಡಾಲರ್ ಮೌಲ್ಯದಲ್ಲಿ ಬದಲಾವಣೆಗೆ ಕಾರಣವಾಯಿತು.
ಡಾಲರ್ ರೇಟ್ ಜಾಸ್ತಿ ಆಗುತ್ತಿದಂತೆ ಚಿನ್ನದ ಬೆಲೆಯು ಕಡಿಮೆಯಾಗುವುದು ಸಾಮಾನ್ಯವಾಗಿದೆ.
3. ಬಂಡವಾಳ ಹೂಡಿಕೆದಾರರ ಮನೋಭಾವ:
ಇತ್ತೀಚಿನ ದಿನಗಳಲ್ಲಿ ಹೂಡಿಕೆದಾರರು ಮರಳಿ ಸ್ಟಾಕ್ ಮಾರುಕಟ್ಟೆಯತ್ತ ಮುಖ ಮಾಡುತ್ತಿದ್ದಾರೆ.
ಚಿನ್ನ ಖರೀದಿಗೆ ಇದು ಸೂಕ್ತ ಸಮಯವೇ?
ಹೌದು, ಬಹುತೇಕ ತಜ್ಞರ ಅಭಿಪ್ರಾಯ ಪ್ರಕಾರ, ಇಂದಿನ ಬೆಲೆ ಇಳಿಕೆಯು ಗ್ರಾಹಕರಿಗೆ ಚಿನ್ನ ಅಥವಾ ಬೆಳ್ಳಿ ಖರೀದಿಗೆ ಅತ್ಯುತ್ತಮ ಅವಕಾಶವನ್ನು ಒದಗಿಸುತ್ತಿದೆ. ಸಾಮಾನ್ಯವಾಗಿ ನಾವು ಇಂಥ ಸಂದರ್ಭಗಳಲ್ಲಿ ಚಿನ್ನ ಕರಗಿಸುವುದು ಬಹಳ ಉಂಟು.
ಮದುವೆ ಅಥವಾ ಹಬ್ಬಗಳ ಪ್ರಾರಂಭಕ್ಕೆ ತಯಾರಿ ಮಾಡುತ್ತಿರುವ ಕುಟುಂಬಗಳು:
ಇಂದಿನ ಬೆಲೆಗೆ ಚಿನ್ನ ಖರೀದಿಸುವುದರಿಂದ ನಂತರದ ಅವಧಿಯಲ್ಲಿ ಆಗಬಹುದಾದ ಬೆಲೆ ಏರಿಕೆಯಿಂದಲೂ ಲಾಭವಾಗಬಹುದು.
ಮದುವೆಯ ಆಭರಣಗಳು, ಹಬ್ಬದ ಸಮಯದಲ್ಲಿ ನೀಡುವ ಉಡುಗೊರೆಗಳಿಗೆ ಈ ಸಮಯವನ್ನು ಬಳಸಿಕೊಳ್ಳಬಹುದು.
ಹೂಡಿಕೆ ಉದ್ದೇಶಕ್ಕಾಗಿ ಚಿನ್ನವನ್ನು ಪರಿಗಣಿಸುವವರಿಗೆ:
ಕಡಿಮೆ ಬೆಲೆಗೆ ಖರೀದಿಸಿದ ಚಿನ್ನವು ಭವಿಷ್ಯದಲ್ಲಿ ಬೆಲೆ ಏರಿದಾಗ ಉತ್ತಮ ಮೌಲ್ಯ ನೀಡುತ್ತದೆ ಇದು ನಿಮಗೂ ಸಹ ಗೊತ್ತಿದೆ.
ಹಾಗಾದ್ರೆ ನೀವು ಕೂಡ ಹೂಡಿಕೆ ಮಾಡಲು ಬಯಸಿದರೆ ಇದೊಂದು ಸ್ಥಿರ ಮತ್ತು ಕಡಿಮೆ ಅಪಾಯದ ಆಯ್ಕೆ ಎಂಬುದಾಗಿ ಪರಿಗಣಿಸಬಹುದು.
ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಯಾವ ದಿಕ್ಕಿಗೆ ಹೋಗಬಹುದು?
ಚಿನ್ನದ ಬೆಲೆಯು ಸದಾ ನಿರ್ಧಿಷ್ಟ ಬೆಲೆಗಳ ಆಧಾರದಲ್ಲಿ ವ್ಯತ್ಯಾಸಗೊಂಡಿರುತ್ತದೆ. ಮುಂದಿನ ದಿನಗಳಲ್ಲಿ ಈ ಕೆಳಗಿನ ಅಂಶಗಳು ದರದ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುತ್ತೆ ಗಮನಿಸಿ:
ಜಾಗತಿಕ ಮಟ್ಟದ ರಾಜಕೀಯ ಬಿಕ್ಕಟ್ಟುಗಳು ಪುನಃ ಪ್ರಾರಂಭವಾದರೆ, ಚಿನ್ನದ ಮೇಲೆ ಹೆಚ್ಚು ಬೇಡಿಕೆ ಬರಬಹುದು.
ಮಾರುಕಟ್ಟೆಯಲ್ಲಿ ಇಳಿಕೆಯಾಗುತ್ತಿರುವ ಬಡ್ಡಿದರಗಳು ಚಿನ್ನದ ಹೂಡಿಕೆಗೆ ಉತ್ತೇಜಿಸುತ್ತದೆ ಹೂಡಿಕೆದಾರರಿಗೆ.
ಉಡುಪು ಉದ್ಯಮ, ಆಭರಣ ವ್ಯಾಪಾರಕ್ಕೆ ವಾಣಿಜ್ಯ ಋತು ಆರಂಭವಾದರೆ, ಆ ಬೇಡಿಕೆ ದರದ ಮೇಲೆ ಪ್ರಭಾವ ಬೀರುತ್ತದೆ.
ಕೊನೆ ಮಾತು:
ಸಾಮಾನ್ಯವಾಗಿ ಚಿನ್ನದ ದರ ಎಷ್ಟು ಹೆಚ್ಚು ಇದೆ ಎಂಬ ಪ್ರಶ್ನೆಗೆ ಗ್ರಾಹಕರು ಸದಾ ಕಾತುರದಿಂದ ಇರುತ್ತಾರೆ. ಆದರೆ ಇಂತಹ ಇಳಿಕೆಗಳ ಸಮಯದಲ್ಲಿ ತ್ವರಿತವಾಗಿ ತೀರ್ಮಾನ ತೆಗೆದುಕೊಳ್ಳುವುದು ಬುದ್ಧಿವಂತಿಕೆ ಎಂದು ಹೇಳಬಹುದು. ಇಂದಿನ ಇಳಿಕೆ ಗ್ರಾಹಕರಿಗೆ ಹೂಡಿಕೆ ಅಥವಾ ಆಭರಣ ಖರೀದಿಗೆ ಒಳ್ಳೆಯ ಅವಕಾಶವನ್ನೇ ನೀಡುತ್ತದೆ.
ಹೀಗಾಗಿ, ನಿಮಗೆ ಚಿನ್ನದ ಖರೀದಿ ಮಾಡಲು ನೀವು ಕೂಡ ಯೋಚನೆ ಮಾಡಿದ್ದರೆ ಅಥವಾ ನಿಕಟ ಭವಿಷ್ಯದಲ್ಲಿ ಮದುವೆ ಅಥವಾ ವಿಶೇಷ ಕಾರ್ಯಕ್ರಮವಿದ್ದರೆ, ಈಗಾಗಲೇ ಖರೀದಿಗೆ ಮುಂದಾಗುವುದು ಉತ್ತಮ ಆಯ್ಕೆ ಎನ್ನಬಹುದು ಏಕೆಂದರೆ ಪ್ರಸ್ತುತ ದಿನಮಾನದಲ್ಲಿ ಚಿನ್ನದ ದರ ಗಗನಕ್ಕೆ ಮುಟ್ಟಲು ಮುಂದಾಗಿದೆ.