ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಕರ್ನಾಟಕ ಸರ್ಕಾರವು ರಾಜ್ಯದ ಆರ್ಥಿಕವಾಗಿ ದುರ್ಬಲ ನಾಗರಿಕರಿಗೆ ಅನುಕೂಲವಾಗಲೆಂದು ಹೊಸ ರೇಷನ್ ಕಾರ್ಡ್ ಅರ್ಜಿ ಅರ್ಜಿ ಸಲ್ಲಿಸಲು ಆನ್‌ಲೈನ್ ಮೂಲಕ ಪ್ರಾರಂಭಿಸಿದೆ.
ಈ ಸೌಲಭ್ಯದಿಂದ ಅರ್ಹರಾದರು ಮನೆಯಲ್ಲಿಯೇ ಕುಳಿತು ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ಲೇಖನದಲ್ಲಿ ಅರ್ಜಿ ಸಲ್ಲಿಸುವ ವಿಧಾನ, ಅಗತ್ಯ ದಾಖಲೆಗಳು ಮತ್ತು ಅದರ ಪ್ರಯೋಜನಗಳ ಕುರಿತು ವಿವರಿಸಲಾಗಿದೆ.
ಇದನ್ನು ಓದಿ:ಚಿನ್ನ ಬೆಳ್ಳಿ ಬೆಲೆಯಲ್ಲಿ ಭಾರಿ ಇಳಿಕೆ!
ಯಾರು ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಬಹುದು?
ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಕೆಲವೊಂದು ಅರ್ಹತಾ ಮಾನದಂಡಗಳನ್ನು ಸರ್ಕಾರ ನಿರ್ಧರಿಸಿದೆ ಇಂಥವರು ಅರ್ಜಿ ಸಲ್ಲಿಸಬಹುದು:
- ಕರ್ನಾಟಕದ ಶಾಶ್ವತ ನಿವಾಸಿಗಳು ಮಾತ್ರ ಅರ್ಜಿ ಸಲ್ಲಿಸಬಹುದು.
- BPL ಕಾರ್ಡ್ ಅಥವಾ ಆರ್ಥಿಕವಾಗಿ ದುರ್ಬಲ ವರ್ಗದವರು ಈ ಯೋಜನೆಗೆ ಅರ್ಹರು.
- ಹೊಸ ಮದುವೆಯಾದವರು, ಅಥವಾ ಕುಟುಂಬದಿಂದ ವಿಭಜನೆಗೊಂಡವರು ಹೊಸ ಕಾರ್ಡ್‌ಗೆ ಅರ್ಜಿ ನೀಡಬಹುದು.
ಅಗತ್ಯ ದಾಖಲೆಗಳು:

ಅರ್ಜಿ ಪ್ರಕ್ರಿಯೆಯಲ್ಲಿ ಕೆಳಕಂಡ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು:
- ಕುಟುಂಬದ ಎಲ್ಲ ಸದಸ್ಯರ ಆಧಾರ್ ಕಾರ್ಡ್
- ಇತ್ತೀಚಿನ ವಿದ್ಯುತ್ ಬಿಲ್ (ವಿಳಾಸದ ದೃಢೀಕರಣಕ್ಕಾಗಿ)
- ಬ್ಯಾಂಕ್ ಪಾಸ್ ಬುಕ್ ಪ್ರತಿಲಿಪಿ
- ಸಂಪರ್ಕಕ್ಕಾಗಿ ಮೊಬೈಲ್ ನಂಬರ್
- ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಫೋಟೋ
- ಆದಾಯ ಪ್ರಮಾಣಪತ್ರ (ತಹಸೀಲ್ದಾರರಿಂದ)
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ವಿಧಾನ:
- ಅಧಿಕೃತ ವೆಬ್‌ಸೈಟ್ ahara.kar.nic.in ಗೆ ಹೋಗಿ
- “ಹೊಸ ರೇಷನ್ ಕಾರ್ಡ್ ಅರ್ಜಿ” ಆಯ್ಕೆಮಾಡಿ
- ನಿಮ್ಮ ಆಧಾರ್ ನಂಬರ್ ಮತ್ತು ಮೊಬೈಲ್ ನಂಬರ್ ನಮೂದಿಸಿ
- OTP ದೃಢೀಕರಣದ ನಂತರ, ಕುಟುಂಬದ ಸದಸ್ಯರ ವಿವರಗಳನ್ನು ನಮೂದಿಸಿ
- ಎಲ್ಲಾ ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ, ಅಪ್ಲೋಡ್ ಮಾಡಿ
- ₹20 ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಿ
- ಅರ್ಜಿ ಸಲ್ಲಿಸಿದ ನಂತರ acknowledgment ಪ್ರಿಂಟ್ ಔಟ್ ತೆಗೆದುಕೊಳ್ಳಿ ಇದು ಬಹಳ ಮುಖ್ಯವಾಗಿರುತ್ತೆ ನೆನಪಿರಲಿ.
ಅರ್ಜಿ ಸಲ್ಲಿಸಿದ ನಂತರ ಏನು?
ಇದನ್ನು ಓದಿ: ಮನೆ ಕಟ್ಟುವವರಿಗೆ ಹೊಸ ರೂಲ್ಸ್ ಗಳು ಜಾರಿ.! ಪ್ರತಿಯೊಬ್ಬರೂ ಗಮನಿಸಬೇಕು.!!
- 15 ದಿನದೊಳಗೆ ಸ್ಥಳೀಯ ಅಧಿಕಾರಿಗಳು ನಿಮ್ಮ ಮನೆಗೆ ಪರಿಶೀಲನೆಗಾಗಿ ಬಾಗಿಲಿಗೆ ಬರಬಹುದು ಅಥವಾ ಇಲ್ಲ.
- ಎಲ್ಲಾ ವಿವರಗಳು ಸರಿಯಾಗಿದ್ದರೆ, 30 ದಿನಗಳೊಳಗೆ ರೇಷನ್ ಕಾರ್ಡ್ ನಿಮಗೆ ಪೋಸ್ಟ್ ಮುಖಾಂತರ ತಲುಪುತ್ತದೆ ಅಥವಾ ನೀವು ಆನ್ಲೈನ್ ಮೂಲಕ ತೆಗೆದುಕೊಳ್ಳಬಹುದು.
ಹೊಸ ರೇಷನ್ ಕಾರ್ಡ್‌ನ ಪ್ರಯೋಜನಗಳು
- ಪ್ರತಿ ತಿಂಗಳು ಪ್ರತಿ ಸದಸ್ಯನಿಗೆ 5 ಕೆಜಿ ಅಕ್ಕಿ ಮತ್ತು ಗೋಧಿ ಸಬ್ಸಿಡಿ ದರದಲ್ಲಿ ಲಭ್ಯವಿದೆ & ಸಕ್ಕರೆ ದೊರೆಯುತ್ತದೆ.
- ಸರ್ಕಾರದ ಇತರೆ ಯೋಜನೆಗಳಿಗೆ (ಆಯುಷ್ಮಾನ್, ಪಿಂಚಣಿ, ಮನೆ ಯೋಜನೆ) ಅರ್ಹತೆ ಸಿಗುತ್ತದೆ.
ಮುಖ್ಯ ಸೂಚನೆಗಳು
- ಅರ್ಜಿ ಸಲ್ಲಿಸುವಾಗ ನಿಖರವಾದ ಮಾಹಿತಿ ಒದಗಿಸಿ.
- ಅಪ್ಲೋಡ್ ಮಾಡುವ ದಾಖಲೆಗಳು ಸ್ಪಷ್ಟವಾಗಿರಲಿ.
- ವಿಳಾಸ ತಪ್ಪಿದರೆ ಕಾರ್ಡ್ ತಲುಪಲು ತೊಂದರೆ ಆಗಬಹುದು.
ಸಹಾಯಕ್ಕಾಗಿ
- ಟೋಲ್ ಫ್ರೀ ನಂಬರ್: 1800-425-5901
- ಸ್ಥಳೀಯ ಜಿಲ್ಲಾ ಆಹಾರ ಮತ್ತು ನಾಗರಿಕ ಪೂರೈಕೆ ಕಚೇರಿ
- ನಿಮ್ಮ ಅರ್ಜಿ ಸ್ಥಿತಿಯನ್ನು ಈ ಲಿಂಕ್‌ನಲ್ಲಿ ಪರಿಶೀಲಿಸಬಹುದು: ahara.kar.nic.in/trackapp
ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದರಿಂದ, ಕರ್ನಾಟಕದ ಕಡುಬಡ ಹಾಗೂ ಬಡ ಕುಟುಂಬಗಳಿಗೆ ಸೂಕ್ತ ನೆರವು ಸಿಕ್ಕಂತಾಗುತ್ತದೆ. ನೀವೆಲ್ಲರೂ ಸರಿಯಾದ ದಾಖಲೆಗಳು ಮತ್ತು ಮಾಹಿತಿಯೊಂದಿಗೆ ಅರ್ಜಿ ಸಲ್ಲಿಸಿ, ಈ ಸೌಲಭ್ಯವನ್ನು ಪ್ರಯೋಜನಪಡಿಸಿಕೊಳ್ಳಿ.