ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಭಾರತದ ಆದಾಯ ತೆರಿಗೆ ಇಲಾಖೆ 2025ರೊಳಗೆ ಪಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್‌ಗೆ ಲಿಂಕ್ ಮಾಡುವುದನ್ನು ಕಡ್ಡಾಯ ಎಂದು ಘೋಷಿಸಿದೆ.
ಈ ನಿರ್ಧಾರ ಡಿಜಿಟಲ್ ಪಾವತಿಗಳನ್ನು ಉತ್ತೇಜಿಸುವ ಹಾಗೂ ತೆರಿಗೆ ಸಂಬಂಧಿತ ಕಾರ್ಯವಿಧಾನಗಳನ್ನು ಸರಳಗೊಳಿಸುವ ಉದ್ದೇಶವನ್ನು ಹೊಂದಿದೆ. ಇಲ್ಲಿವರೆಗೆ ಪಾನ್ ಲಿಂಕ್ ಮಾಡಿಲ್ಲದವರು ಈಗಲೇ ಈ ಪ್ರಕ್ರಿಯೆ ಪೂರ್ಣಗೊಳಿಸಬೇಕು, ಇಲ್ಲದಿದ್ದರೆ ಪಾನ್ ನಿಷ್ಕ್ರಿಯವಾಗುವ ಮತ್ತು ₹1000ರ ದಂಡ ಬೀಳುವ ಸಾಧ್ಯತೆ ಇದೆ.
ಪಾನ್ ಮತ್ತು ಆಧಾರ್ ಲಿಂಕ್ ಏಕೆ ಮಾಡಿಸಬೇಕು..?

- ಕಾನೂನುಬದ್ಧತೆ: ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 139AA ಅನ್ವಯ, ಪಾನ್-ಆಧಾರ್ ಲಿಂಕ್ ಮಾಡುವುದು ಕಡ್ಡಾಯವಾಗಿರುತ್ತೆ.
- ನಿಷ್ಕ್ರಿಯ : ಲಿಂಕ್ ಮಾಡದಿದ್ದರೆ ನಿಮ್ಮ ಪಾನ್ ನಿಷ್ಕ್ರಿಯವಾಗಬಹುದು.
- ದಂಡ: ನಿರ್ಧಾರಿತ ದಿನಾಂಕದೊಳಗೆ ಲಿಂಕ್ ಮಾಡದಿದ್ದರೆ ₹1000 ದಂಡ ವಿಧಿಸಲಾಗುತ್ತದೆ.
- ಅಗತ್ಯತೆಯುಳ್ಳ ಲಿಂಕ್: ಬ್ಯಾಂಕ್ ಖಾತೆ, ಹೂಡಿಕೆ, ಟ್ಯಾಕ್ಸ್ ಫೈಲಿಂಗ್, ಹೂಡಿಕೆಗಳ ಬದಲಾವಣೆ ಮುಂತಾದ ಹಣಕಾಸು ಚಟುವಟಿಕೆಗಳಲ್ಲಿ ಲಿಂಕ್ ಆದ ಪಾನ್ ಅಗತ್ಯ.
ಇದನ್ನು ಓದಿ: ಹೊಸ ರೇಷನ್ ಕಾರ್ಡ್ ಅರ್ಜಿ ಪ್ರಾರಂಭ.! ಫುಲ್ ಡೀಟೆಲ್ಸ್ ಇಲ್ಲಿದೆ! ಬೇಗ ಬೇಗ ಅರ್ಜಿ ಸಲ್ಲಿಸಿ.!!
ಯಾರು ಲಿಂಕ್ ಮಾಡುವ ಅಗತ್ಯ ಇರುವುದಿಲ್ಲ.?
- ಭಾರತೀಯರಾಗಿರದ ಅನಿವಾಸಿ ಭಾರತೀಯರು (NRIs)
- 80 ವರ್ಷಕ್ಕೂ ಅಧಿಕ ವಯಸ್ಸಿನವರು
- ಅಸ್ಸಾಂ, ಮೇಘಾಲಯ ಮತ್ತು ಜಮ್ಮು-ಕಾಶ್ಮೀರ ನಿವಾಸಿಗಳು
- ಆಧಾರ್ ಹೊಂದಿಲ್ಲದವರು
ಲಿಂಕ್ ಮಾಡಲು ಬೇಕಾದ ಡಾಕ್ಯುಮೆಂಟುಗಳು
- ಪಾನ್ ಕಾರ್ಡ್ ಸಂಖ್ಯೆ
- ಆಧಾರ್ ಕಾರ್ಡ್ ಸಂಖ್ಯೆ
- ಆಧಾರ್‌ಗೆ ಲಿಂಕ್ ಆದ ಮೊಬೈಲ್ ಸಂಖ್ಯೆ (OTP ದೃಢೀಕರಣಕ್ಕೆ)
- ಡೆಬಿಟ್/ಕ್ರೆಡಿಟ್ ಕಾರ್ಡ್ ಅಥವಾ UPI ಅಥವಾ ನೆಟ್‌ಬ್ಯಾಂಕಿಂಗ್ (ದಂಡ ಪಾವತಿಗೆ ₹1000)
- ಇಮೇಲ್ ಮತ್ತು ಮೊಬೈಲ್ ಸಂಖ್ಯೆ
ಪಾನ್ ಆಧಾರ್ ಲಿಂಕ್ ಮಾಡುವ ಆನ್‌ಲೈನ್ ಪ್ರಕ್ರಿಯೆ
ಇದನ್ನು ಓದಿ:ಆಗಸ್ಟ್ 15ರಿಂದ ಹೊಸ ಫಾಸ್ಟ್‌ಟ್ಯಾಗ್ ನಿಯಮ.! ವಾಹನ ಸವಾರರಿಗೆ ಬೆಳ್ಳಂ ಬೆಳಿಗ್ಗೆ ಸಿಹಿ ಸುದ್ದಿ.!!
- incometax.gov.in ಗೆ ಭೇಟಿ ನೀಡಿ.
- Quick Links ನಲ್ಲಿ “Link Aadhaar Status” ಮೇಲೆ ಕ್ಲಿಕ್ ಮಾಡಿ.
- ಪಾನ್ ಮತ್ತು ಆಧಾರ್ ಸಂಖ್ಯೆಯನ್ನು ಹಾಕಿ ಸ್ಥಿತಿಯನ್ನು ಪರಿಶೀಲಿಸಿ.
- Already Linked ಆದರೆ, ಯಾವುದೇ ಕ್ರಮ ಕೈಗೊಳ್ಳಬೇಕಾಗಿಲ್ಲ.
- ಇಲ್ಲದಿದ್ದರೆ “Link Aadhaar” ಮೇಲೆ ಕ್ಲಿಕ್ ಮಾಡಿ.
- ಪಾನ್, ಆಧಾರ್ ಸಂಖ್ಯೆ, ಚಲನ್ ವಿವರ ಮತ್ತು ಮೊಬೈಲ್ ಸಂಖ್ಯೆ ನಮೂದಿಸಿ.
- OTP ಪಡೆಯಿರಿ ಮತ್ತು ಬಂದ ಓಟಿಪಿಯನ್ನು ನಮೂದಿಸಿ.
- ₹1000 ದಂಡ ಪಾವತಿಸಲು “e-Pay Tax” ವಿಭಾಗಕ್ಕೆ ಹೋಗಿ:
- PAN, Assessment Year 2025-26, Other Receipts (500) ಆಯ್ಕೆ ಮಾಡಿ.
- ಪಾವತಿಯನ್ನು ಮಾಡಿ, ಚಲನ್ ಡೌನ್‌ಲೋಡ್ ಮಾಡಿ.
- 30 ನಿಮಿಷದ ನಂತರ ಮತ್ತೆ “Link Aadhaar” ವಿಭಾಗಕ್ಕೆ ಹೋಗಿ.
- ಇಲ್ಲಿ ಸರಿಯಾಗಿ ಗಮನಿಸಿ, ಮಾಹಿತಿಯನ್ನು ಮೊದಲು ನಮೂದಿಸಿ → OTP → “Link Aadhaar” ಕ್ಲಿಕ್ ಮಾಡಿ ಈ ಪ್ರೋಸೆಸ್ ಸರಿಯಾಗಿ ಮಾಡಿ.
- “PAN is linked with Aadhaar” ಎಂಬ ಸಂದೇಶ ಬರುತ್ತದೆ.
ನಮ್ಮ ಕೊನೆ ಮಾತು:
Pan Aadhaar Link Online 2025 ಪ್ರಕ್ರಿಯೆ ಈಗ ಹೆಚ್ಚು ಸರಳವಾಗಿದೆ. ಗಮನಿಸಿ ನೀವು ನಿಮ್ಮ ಮೊಬೈಲ್ ಮೂಲಕವೇ ಅಥವಾ ಕಂಪ್ಯೂಟರ್ ಲ್ಯಾಪ್ಟಾಪ್ ಮೂಲಕವೇ ಮನೆಯಲ್ಲಿ ಕೂತು ಮಾಡಬಹುದು ಎಲ್ಲಿ ಹೊರಗಡೆ ಹೋಗಿ ಆನ್ಲೈನ್ ಸೆಂಟರಿಗೆ ಹೋಗಿ ಅಥವಾ ಸಿಎಸ್ಸಿ ಸುಂಟರಗಳಿಗೆ ಹೋಗಿ ಮಾಡಿಸುವ ಅವಶ್ಯಕತೆ ಇರುವುದಿಲ್ಲ ಅಥವಾ ನಿಮಗೆ ಗೊತ್ತಾಗದೆ ಇದ್ದರೆ ಹತ್ತಿರ ಇರುವಂತಹ ಆನ್ಲೈನ್ ಸೆಂಟರಿಗೆ ಹೋಗಬಹುದು.
ಗಮನಿಸಿ ಪ್ಯಾನ್ ಕಾರ್ಡ್ ಆಧಾರ್ ಕಾರ್ಡ್ ಲಿಂಕ್ ಮಾಡದೆ ಇದ್ದಲ್ಲಿ 1000 ದಂಡ ಹಾಕುತ್ತಾರೆ ಹಾಗೂ ನಿಮ್ಮ ಪಾನ್ ನಿಷ್ಕ್ರಿಯವಾಗಬಹುದು ಒಂದು ವೇಳೆ ಲಿಂಕ್ ಮಾಡಿದೆ ಇದ್ದಲ್ಲಿ. ಈ ಪ್ರಕ್ರಿಯೆಯನ್ನು ವಿಳಂಬ ಮಾಡದೆ ಬೇಗನೆ incometax.gov.in ಮೂಲಕ ಪೂರ್ಣಗೊಳಿಸಿ. ಲಿಂಕ್ ಆದ ನಂತರ 24-48 ಗಂಟೆಗಳಲ್ಲಿ ನಿಮ್ಮ ಪಾನ್ ಮತ್ತೆ ಸಕ್ರಿಯವಾಗುತ್ತದೆ. ಹಣಕಾಸು ವ್ಯವಹಾರಗಳಲ್ಲಿ ತೊಂದರೆಗಳನ್ನು ತಪ್ಪಿಸಲು, ತಕ್ಷಣವೇ ಈ ಪ್ರಕ್ರಿಯೆಯನ್ನು ಸಂಪೂರ್ಣಗೊಳಿಸಿ.