ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ನಿಮಗೆಲ್ಲ ತಿಳಿದಿರುವ ಹಾಗೆ ಇತ್ತೀಚೆಗೆ ಕೇಂದ್ರ ಸರ್ಕಾರವು ಎಲ್ಲಾ ಬಡ ನಾಗರಿಕರಿಗಾಗಿ ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಪಿಎಂ ಸೂರ್ಯ ಘರ್ ಮುಫ್ತ ಬಿಜಿಲಿ ಯೋಜನೆ (PM Surya Ghar Muft Bijli Yojana). ಈ ಯೋಜನೆಯು ವಿಶೇಷವಾಗಿ ರೇಷನ್ ಕಾರ್ಡ್ ಹೊಂದಿರುವ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವುದರ ಜೊತೆಗೆ ಪ್ರತಿ ತಿಂಗಳು ಉಚಿತ ವಿದ್ಯುತ್ ಉಪಯೋಗಿಸಲು ಅವಕಾಶ ಒದಗಿಸುತ್ತದೆ.
ಯೋಜನೆಯ ಉದ್ದೇಶ ಏನು?
ಈ ಯೋಜನೆಯ ಪ್ರಮುಖ ಉದ್ದೇಶಗಳೆಂದರೆ ಈ ಕೆಳಗಿನಂತೆ ವಿವರಿಸಲಾಗಿದೆ ಗಮನಿಸಿ.

ಉಚಿತ ವಿದ್ಯುತ್
ಈ ಯೋಜನೆಯಡಿ, ಫಲಾನುಭವಿಗಳಿಗೆ ಪ್ರತಿ ತಿಂಗಳು 300 ಯೂನಿಟ್ ವರೆಗೆ ವಿದ್ಯುತ್ ಉಚಿತವಾಗಿ ಲಭ್ಯವಾಗುತ್ತದೆ. ಇದರಿಂದಾಗಿ ತಿಂಗಳ ಕೊನೆಗೆ ಬರುವ ವಿದ್ಯುತ್ ಬಿಲ್ಲುಗಳ ಭಾರ ಕಡಿಮೆಯಾಗುವುದು ಖಚಿತ ಗಮನಿಸಿ ನೀವೇನಾದ್ರೂ ಒಂದು ತಿಂಗಳಿಗೆ 300 ಯೂನಿಟ್ ಒಳಗಡೆ ಎದ್ದು ಬಳಕೆ ಮಾಡುತ್ತಿದ್ದೀರಾ ಎಂದರೆ ನೀವು ಚಿಂತೆ ಪಡುವ ಅವಶ್ಯಕತೆ ಇರುವುದಿಲ್ಲ ಸಂಪೂರ್ಣ ಉಚಿತವಾಗಿ ಇರುತ್ತೆ ಒಂದು ರೂಪಾಯಿ ಖರ್ಚು ಕೂಡ ಬರುವುದಿಲ್ಲ ಕರೆಂಟ್ ಬಿಲ್ಲಲ್ಲಿ.
ಸೌರ ಫಲಕ ಅಳವಡಿಕೆಗಾಗಿ ಕೇಂದ್ರದ ಸಬ್ಸಿಡಿ
ಹೌದು ಕೇಂದ್ರ ಸರ್ಕಾರವು ಮನೆಮೇಲೆ ಸೌರ ಫಲಕಗಳನ್ನು ಅಳವಡಿಸಲು ಇಚ್ಛಿಸುವವರಿಗೆ ಹೆಚ್ಚಿನ ಮೊತ್ತದ ಸಹಾಯಧನ ನೀಡುತ್ತಿದೆ. ಇದರಿಂದಾಗಿ ಜನರು ಸ್ವಂತ ವಿದ್ಯುತ್ ಉತ್ಪಾದನೆಗೆ ಉತ್ತೇಜನ ಪಡೆದುಕೊಳ್ಳುವಂತಾಗಿದೆ.
ಪರಿಸರ ಸ್ನೇಹಿ ಶಕ್ತಿ
ಈ ಯೋಜನೆಯ ಇನ್ನೊಂದು ಪ್ರಮುಖ ಉದ್ದೇಶವೇ ಎಕೋಫ್ರೆಂಡ್ಲಿ ಶಕ್ತಿ ಉತ್ಪತ್ತಿಯನ್ನು ಪ್ರೋತ್ಸಾಹಿಸುವುದು. ಸೌರ ಶಕ್ತಿ ಬಳಸಿ ವಿದ್ಯುತ್ ಉತ್ಪಾದನೆಯಿಂದ ಕಾರ್ಬನ್ ವಿಸರ್ಜನೆ ಕಡಿಮೆಯಾಗುತ್ತದೆ ಮತ್ತು ಪರಿಸರದ ಮೇಲಿನ ಒತ್ತಡವೂ ಇಳಿಯುತ್ತದೆ.
ಎಷ್ಟು ಸಹಾಯಧನ ಸಿಗುತ್ತದೆ?
ಯೋಜನೆಯಡಿ, ಮನೆಮೇಲೆ ಅಳವಡಿಸಬಹುದಾದ ಸೌರ ಫಲಕದ ಸಾಮರ್ಥ್ಯದ ಆಧಾರದ ಮೇಲೆ ಸಬ್ಸಿಡಿ ಮೊತ್ತ ನಿರ್ಧಾರವಾಗುತ್ತದೆ:
- 1 ಕಿಲೋವ್ಯಾಟ್ ಸೌರ ಫಲಕ: ₹30,000 ವರೆಗೆ ಸಬ್ಸಿಡಿ
- 2 ಕಿಲೋವ್ಯಾಟ್ ಸೌರ ಫಲಕ: ₹60,000 ವರೆಗೆ ಸಬ್ಸಿಡಿ
- 3 ಕಿಲೋವ್ಯಾಟ್ ಅಥವಾ ಹೆಚ್ಚು: ₹78,000 ವರೆಗೆ ಸಬ್ಸಿಡಿ
ಗಮನಿಸಿ ಇಲ್ಲಿ ನೀವು ಈ ಸಹಾಯಧನ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ ಚಿಂತೆಪಡುವ ಅವಶ್ಯಕತೆ ಇರುವುದಿಲ್ಲ ಇಲ್ಲಿ.
ಅರ್ಜಿ ಸಲ್ಲಿಸುವ ವಿಧಾನ
ಈ ಯೋಜನೆಯ ಲಾಭ ಪಡೆಯಲು ಇಚ್ಛಿಸುವವರು ಕೆಳಗಿನ ಕ್ರಮ ಅನುಸರಿಸಬಹುದು:
- ಅಧಿಕೃತ ವೆಬ್ಸೈಟ್: https://pmsuryaghar.gov.in ಗೆ ಭೇಟಿ ನೀಡಿ
- “Apply for Rooftop Solar” ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ
- ಅಗತ್ಯ ಮಾಹಿತಿ ಮತ್ತು ದಾಖಲೆಗಳನ್ನು ಭರ್ತಿ ಮಾಡಿ
- ಅರ್ಜಿಯನ್ನು ಸಲ್ಲಿಸಿ ಮತ್ತು ಮುಂದಿನ ಪ್ರಕ್ರಿಯೆಯಿಗಾಗಿ ನಿಮ್ಮ ನೋಂದಣಿಯ ಸ್ಥಿತಿಯನ್ನು ತಪಾಸಿಸಿ
ಅಥವಾ, ಹತ್ತಿರದ ಆನ್ಲೈನ್ ಸೇವಾ ಕೇಂದ್ರದಲ್ಲಿ ಸಹಾಯ ಪಡೆದು ಅರ್ಜಿ ಸಲ್ಲಿಸಬಹುದು.
ಯಾರು ಅರ್ಹರು?
- ಭಾರತದಲ್ಲಿ ನಿವಾಸಿಯಾಗಿರಬೇಕು
- ರೇಷನ್ ಕಾರ್ಡ್ ಅಥವಾ ಇತರೆ ಗುರುತಿನ ದಾಖಲೆ ಇರಬೇಕು
- ಮನೆಯ ಮೇಲ್ಛಾವಣಿ (terrace) ಹೊಂದಿರುವವರು
- ವಿದ್ಯುತ್ ಸಂಪರ್ಕ ಹೊಂದಿರುವ ಮನೆ
ಕೊನೆ ಮಾತು:
ಪಿಎಂ ಸೂರ್ಯ ಘರ್ ಯೋಜನೆ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಬಹಳ ಉಪಯುಕ್ತ ಯೋಜನೆಯಾಗಿದ್ದು, ಉಚಿತ ವಿದ್ಯುತ್ ಮತ್ತು ಆರ್ಥಿಕ ಸಹಾಯವನ್ನು ಒದಗಿಸುತ್ತದೆ. ಇದು ಮನೆಯ ವಿದ್ಯುತ್ ವೆಚ್ಚವನ್ನು ಕಡಿಮೆ ಮಾಡುವುದರ ಜೊತೆಗೆ ಪರಿಸರ ಸ್ನೇಹಿ ಶಕ್ತಿಯ ಬಳಕೆಯತ್ತ ನಮ್ಮ ಹೆಜ್ಜೆ ಸಾಗಿಸುತ್ತದೆ. ಇಂತಹ ಉಪಯುಕ್ತ ಯೋಜನೆಯ ಲಾಭ ಪಡೆಯಲು ಈಗಲೇ ಅರ್ಜಿ ಸಲ್ಲಿಸಿ.
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ 👇👇 : https://pmsuryaghar.gov.in